Search This Blog

Thursday, March 11, 2010


ಕಂಬನಿಯ ಕಥೆ 

ನಾನೊಬ್ಬನೆ ಕುಳಿತ್ತಿದ್ದೆ ಸುಮ್ಮನೆ 
ಕೇಳಿದಂತಾಯಿತು ಯಾರದೂ ಮಾತು ಮೆಲ್ಲನೆ 

ಕಣ್ಣಂಚಿನಲ್ಲಿ ನಿಂತಿತ್ತು ಒಂದು ಕಣ್ಣೀರ ಹನಿ 
ಹೇಳ ತೊಡಗಿತು ತನ್ನ ಕಥೆಯ ಸುರಿಸುತ್ತಾ ಕಂಬನಿ 

ಎಲ್ಲರ೦ತ್ತಿರಲಿಲ್ಲ   ಆಕೆ 
ಕಂಡಂದಿನಿಂದ ಗರಿಗೆದರಿದವು ಹಲವಾರು ಬಯಕೆ

ಕಾಣುತಿತ್ತು ಅದರ ಪ್ರೀತಿ, ಸ್ಪಟಿಕ ಸ್ಪಷ್ಟದಷ್ಟೇ  ನಿಜ 
ಸಮಾದಾನಿಸುತ್ತಾ  ನಾನಂದೆ, ಪ್ರೀತಿಯ ಹುಟ್ಟು ಎಲ್ಲರಲ್ಲೂ ನಿಜ

ಉದುರಿದವು ಕಣ್ಣೀರ ಹನಿ ಹಲವು 
ಉದುರುವ ಪ್ರತಿ ಹನಿಯ ಕಂಬನಿಗೆ ಕಾರಣ ಒಂದೇ, ಆಕೆಯ ಒಲವು

ಪ್ರೀತಿಯ ತಿರಸ್ಕರಿಸಿದಕ್ಕಿಲ್ಲ ಎನಗೆ ದುಖ:
ಕಂಡು ಕಾಣದಂತೆ ಮರೆಯಾಗುವುದು ನೀಡಿದೆ ಸಿಡಿಲ ಹೊಡೆತ

ಕಂಬನಿಯ ಕೊನೆಯ ಮಾತು ಕೇಳಿ ನನ್ನ ಕಣ್ಣಲ್ಲೂ ಬಂತು ನೀರು 
ಜೊತೆಜೊತೆಯಾಗಿ ಉದುರಿದೆರಡು ಹನಿಗಳು ಮರೆಯಾದವು ಉಳಿಸದೆ ಒಂದೂ ಕುರುಹು
                                      :-  ಕನ್ನಡಿ   

No comments:

Post a Comment