Search This Blog

Thursday, August 16, 2012




ಎಲ್ಲೇ  ಇಲ್ಲದ ಅವಕಾಶ
ನಿಳುಕದಂತಿದೆ ಆಕಾಶ
ಅವಕಾಶದ ರೆಕ್ಕೆ ಕಟ್ಟಿ ಆಕಾಶದಿ ಹುಡುಕುವಾಸೆ  ನಿಜ ಹರ್ಷವ

ರಾತ್ರಿ ನಿದ್ದೆ ತರಿಸದ ಹಗಲು ಕನಸು
ಲಗಾಮಿಲ್ಲದೆ ಕನಸ ಹೊತ್ತು ಓಡುವ ಮನಸು
ಈ  ಕನಸ ನನಸಾಗಿಸು ಮುಗಿಯುವ ಮುನ್ನ ನಿನ್ನ  ಈ ವಯಸು :)




Sunday, March 21, 2010

ಆ ದಿನಗಳು


ಆ ದಿನಗಳು :)


ಬಾಲ್ಯದ ನೆನಪೇ ಬಲು ಸುಂದರ
ಮರು ಮೆಲುಕಿದಷ್ಟು   ಮದುರ


ಮನೆಯೆದುರ ಅಂಗಳ
ಬಾನಂಗಳದಷ್ಟೇ ವಿಶಾಲ 


ಕೈಯಲ್ಲಿದರೆ ಬ್ಯಾಟು ಬಾಲು
ದಿನದ ಆಟಕಿಲ್ಲ ಬ್ರೇಕು 


ಆಗಾಗ ಆಟದಲ್ಲಿ ಗೆಳೆಯರ ಮುನಿಸು
ಮರುಕ್ಷಣವೇ ಮುನಿಸ ಮರೆವ ಮನಸು 

ಭಾನುವಾರ ಇಲ್ಲ ಯಾವ ಚಿಂತೆ 
ಸೋಮವಾರ ಹೊರ ಬೇಕು ಪುಸ್ತಕದ ಕಂತೆ 


ತಿಳಿಯದ ಪ್ರಶ್ನೆಗೆ, ಅರಿಯದ ಉತ್ತರ 
ಬೆಳೆಯ ಬೇಕೆಂಬ ಆಸೆ ಬಾನೆತರ


ಶಾಲೆಗೆ ಹೆದರಿ ಹೋಗಲು ಹಿಡಿದ ಪಟ್ಟು
ಕೊನೆಗೆ ಎರಡು ಕಡೆ ತಿಂದ ಪೆಟ್ಟು 

ನಕ್ಕು ನಗಿಸಿದ ಆ ಕ್ಷಣಗಳು 

ಈಗ ಬರಿಯ ನೆನೆಪುಗಳು 



ಬಾಲ್ಯದ ನೆನಪೇ ಬಲು ಸುಂದರ
ಮರು ಮೆಲುಕಿದಷ್ಟು   ಮದುರ

                               :- ಕನ್ನಡಿ 

Sunday, March 14, 2010

ಮನೆಯಂಗಳದ ಹೂವು


ಮನೆಯಂಗಳದ ಹೂವು 


ಮುದ್ದು ಕಂಗಳಲ್ಲಿ ಸ್ಪಟಿಕದ ಹೊಳಪು

ನಾಜೂಕು ಮೈ ತುಂಬಾ ನುಣುಪು

ಆಡುವ ಆಟ ತರಿಸುವುದು ನಮ್ಮ ಬಾಲ್ಯದ ನೆನಪು

ಆಟದಲ್ಲಿಲ್ಲ ಒಳಿತು ಕೆಡುಕಿನ ಅರಿವು

ಶಾಂತ ಮನಸು, ಇಲ್ಲದೆ ಪ್ರಪಂಚದ ಪರಿವು

ಪ್ರತಿ ಸ್ಪರ್ಶದಲಿ  ಜ್ಯಾನದ ಹರಿವು

ಎಳೆಯ ಮನಸು ಮಾಡಲಾರದು ಯಾವ ನಿಲುವು

ಈಗ ಚಿತ್ತದಲಿ  ಬರಿ ಪ್ರಶ್ನೆಗಳ  ಬರುವು

ಮುಖದ ಕನ್ನಡಿ ನೋಡಲು  ಚೆಲುವು

ಎಂಥ: ನೋಡುಗನ ಮನದಲ್ಲೂ  ಹುಟ್ಟುವುದು  ಒಲವು

ಆ ಮುದ್ದು ಗೊಂಬೆಯ ತಬಿದಾಗ ಖುಷಿ ಸಿಕ್ಕಂತೆ ಗೆಲುವು 

ಎಲ್ಲರ ಮನೆಯಂಗಳದಲಿ ಇರಬೇಕು  ಇಂಥ: ಒಂದು ಸದಾ ನಗುವ  ಹೂವು

                                   :- ಕನ್ನಡಿ 

Thursday, March 11, 2010


ಕಂಬನಿಯ ಕಥೆ 

ನಾನೊಬ್ಬನೆ ಕುಳಿತ್ತಿದ್ದೆ ಸುಮ್ಮನೆ 
ಕೇಳಿದಂತಾಯಿತು ಯಾರದೂ ಮಾತು ಮೆಲ್ಲನೆ 

ಕಣ್ಣಂಚಿನಲ್ಲಿ ನಿಂತಿತ್ತು ಒಂದು ಕಣ್ಣೀರ ಹನಿ 
ಹೇಳ ತೊಡಗಿತು ತನ್ನ ಕಥೆಯ ಸುರಿಸುತ್ತಾ ಕಂಬನಿ 

ಎಲ್ಲರ೦ತ್ತಿರಲಿಲ್ಲ   ಆಕೆ 
ಕಂಡಂದಿನಿಂದ ಗರಿಗೆದರಿದವು ಹಲವಾರು ಬಯಕೆ

ಕಾಣುತಿತ್ತು ಅದರ ಪ್ರೀತಿ, ಸ್ಪಟಿಕ ಸ್ಪಷ್ಟದಷ್ಟೇ  ನಿಜ 
ಸಮಾದಾನಿಸುತ್ತಾ  ನಾನಂದೆ, ಪ್ರೀತಿಯ ಹುಟ್ಟು ಎಲ್ಲರಲ್ಲೂ ನಿಜ

ಉದುರಿದವು ಕಣ್ಣೀರ ಹನಿ ಹಲವು 
ಉದುರುವ ಪ್ರತಿ ಹನಿಯ ಕಂಬನಿಗೆ ಕಾರಣ ಒಂದೇ, ಆಕೆಯ ಒಲವು

ಪ್ರೀತಿಯ ತಿರಸ್ಕರಿಸಿದಕ್ಕಿಲ್ಲ ಎನಗೆ ದುಖ:
ಕಂಡು ಕಾಣದಂತೆ ಮರೆಯಾಗುವುದು ನೀಡಿದೆ ಸಿಡಿಲ ಹೊಡೆತ

ಕಂಬನಿಯ ಕೊನೆಯ ಮಾತು ಕೇಳಿ ನನ್ನ ಕಣ್ಣಲ್ಲೂ ಬಂತು ನೀರು 
ಜೊತೆಜೊತೆಯಾಗಿ ಉದುರಿದೆರಡು ಹನಿಗಳು ಮರೆಯಾದವು ಉಳಿಸದೆ ಒಂದೂ ಕುರುಹು
                                      :-  ಕನ್ನಡಿ   

ನಿರಂತರ


ನಿರಂತರ 
ಕಣ್ಣಂಚಿನಲಿ ಕಂಡ ಕನಸು 
ಕಣ್ಣೀರ ಸುರಿಸಿ 
ಮರೆಯಾಯಿತು ಈ ಹೊತ್ತು 

ಭಾರವಾದ ಎದೆ 
ನನ್ನಿಂದ ನಾ ಕಳೆದುಕೊಂಡ ಕಥೆ 
ಆಗಿದೆ ಇಂದು ಬರಿಯ ವ್ಯಥೆ 

ನಿನ್ನ ಮೌನ ಕರ್ಕಶವಾಗಿ 
ಭಾವನೆ ಕಣ್ಣೀರ ಹನಿಯಾಗಿ 
ಮೊದಲ ಬಾರಿಗೆ ಪ್ರೀತಿ ನಿನಗಾಗಿ 

ನಿನ್ನಿಂದ  ದೂರವಾಗ ಬೇಕೆಂದರು 
ಆಗುತಿಲ್ಲ  ನನ್ನಿಂದ 
ನಿನ್ನ  ಸ್ನೇಹಕೊಸ್ಕರ ಮಿಡಿಯುತಿದೆ 
ಈ ಹೃದಯ ನಿರಂತರ .....
 :- ಕನ್ನಡಿ  


Saturday, March 6, 2010

ಅಂತರಂಗ


                                                       ಅಂತರಂಗ

ಎದೆಯಲ್ಲಿ  ನೀನಿಲ್ಲದೆ ಹೆಪ್ಪುಗಟ್ಟಿದೆ ಕಣ್ಣಿರು 
ರಾತ್ರಿಯ ಚಂದ್ರ, ನಕ್ಷತ್ರಗಳ ನಡುವೆ ಇದ್ದು ಒಂಟಿಯಾತ 
ಹಾಗೆ ಇಲ್ಲಿ ಎಲ್ಲರ ನಡುವಿದ್ದು ಒಂಟಿ ನಾನು 
ಯಾಕೆ  ಅಂತರಂಗದಲಿ  ಈ ನೋವು.......

ಮನದ ಪ್ರಶ್ನೆಗಳಿಗೆ ಉತ್ತರ ಸಿಕ್ಕರೂ ಸಿಗದ ಅನುಭವ
ಇಗ ಲಗಾಮು ಕಳೆದು ಕೊಂಡಿದೆ ಮನಸ್ಸಿನ ಭಾವ 
ಬೇಡ ಎಂದರು ನಿನ್ನ ಸನಿಹವ ಬಯಸುತಿದೆ ಈ ಜೀವ 
ಯಾಕೆ  ಅಂತರಂಗದಲಿ  ಈ ನೋವು......

ಮತ್ತೆ ಮೊದಲಿನಂತೆ  ಇರುವಾಸೆ 
ಮತ್ತೆ ಆ ಕನಸಿನ ಲೋಕದಲಿ ತೇಲುವಾಸೆ   
ಮತ್ತದೆ ಭಯ, ಎಲ್ಲಿ ನನ್ನ ಪ್ರೀತಿ ಬದಲಿಸುವುದೋ 
ನಿನ್ನ ಜೀವನ ದೆಸೆ............
ಯಾಕೆ  ಅಂತರಂಗದಲಿ  ಈ ನೋವು......
ಉತ್ತರಿಸದೆ  ಎದೆ ಸುಡುವ ಕಾವು.???                                                
:- ಕನ್ನಡಿ 

Thursday, March 4, 2010

ದಡದ ಪ್ರೀತಿ




ದಡದ ಪ್ರೀತಿ

ಹರಿವ ನದಿ ಕೊನೆಗೆ ಸೇರುವುದು 
ಸಾಗರವ

ನದಿ ಲೆಕ್ಕಿಸದು ದಾರಿಯಲಿ ಸಿಕ್ಕ 
ನದಿ ದಡವ

ಕೊಚ್ಚಿ ಹೋದರು ಅದರ ಪ್ರೀತಿಯ
ಕನಸು

ಎಂದೂ ತಡೆಯದು ನದಿಯ 
ಹರಿವು

ಕೊಚ್ಚಿ ಹೋದಷ್ಟು ಹೆಚ್ಚುತಿಹುದು
ಪ್ರೀತಿ

ನದಿಯ ತಡೆದಲ್ಲಿ, ಸ್ನೇಹ ಮುರಿದು ಬೀಳುವ 
ಭೀತಿ

ನದಿಯ ಸಂತೋಷ, ಹಿಡಿದಾಗ ಸಾಗರವ 
ಅಪ್ಪಿ

ಈ ನದಿಯ ಸಂತೋಷವ ಕಂಡು, ನದಿಯ ದಡಕ್ಕೆ 
ತೃಪ್ತಿ 

                                             :- ಕನ್ನಡಿ