ನಾನು ?
ತನ್ನ ಸಂಗಾತಿಗಾಗಿ ಮಧುರ ಹಾಡು
ಹಾಡಬಲ್ಲ ಕೋಗಿಲೆ ನಾನಲ್ಲ ........
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ತಂಪು ತಂಗಾಳಿಯೊಂದಿಗೆ ತಪ್ಪದೆ
ರಾತ್ರಿ ನೈದಿಲೆಯ ತಬ್ಬುವ, ಚಂದ್ರ ನಾನಲ್ಲ ........
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ಮೃದು ಕೆನ್ನೆಯಲಿ ನಿಂತ ಇಬ್ಬನಿಯ
ನಿತ್ಯ ಒರೆಸಲು ಬರುವ, ತಾವರೆಯ ಪ್ರೀತಿಯ ಸೂರ್ಯ ನಾನಲ್ಲ......
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ಮಧು ಭರಿತ ತುಟಿಯ ಜೇನ ಹೀರುತ
ಮುದ್ದು ಮಾಡುವ, ಹೂವಿನ ರಸಿಕ ದುಂಭಿ ನಾನಲ್ಲ........
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ಮರಳ ದಂಡೆಯಡೆಗೆ ಓಡೋಡಿ ಬಂದು
ಮರುಕ್ಷಣದಲಿ, ಮರೆಯಾಗುವ ಸಮುದ್ರದ ಅಲೆ ನಾನು.......
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ಕ್ಷಣಾರ್ದದಲ್ಲಿ ಜಗವ ಜಗಮಗಿಸಿ
ಮಿಂಚಿ ಮರೆಯಾಗುವ, ಮಿಂಚು ನಾನು.......
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
ಕಂಡೂ ಕಾಣದಂತೆ, ಕಣ್ಣ ಮರುಳು
ಮಾಡುವ, ಮರಳುಗಾಡಿನ ಮರೀಚಿಕೆ ನಾನು.......
ಗೆಳತಿ ಮತ್ತೆ ಏಕೆ ನನ್ನಲ್ಲಿ ಈ ಒಲವು ?
:- ಕನ್ನಡಿ
No comments:
Post a Comment