Thursday, August 16, 2012
Sunday, March 21, 2010
ಆ ದಿನಗಳು
ಆ ದಿನಗಳು :)
ಬಾಲ್ಯದ ನೆನಪೇ ಬಲು ಸುಂದರ
ಮರು ಮೆಲುಕಿದಷ್ಟು ಮದುರ
ಮನೆಯೆದುರ ಅಂಗಳ
ಬಾನಂಗಳದಷ್ಟೇ ವಿಶಾಲ
ಕೈಯಲ್ಲಿದರೆ ಬ್ಯಾಟು ಬಾಲು
ದಿನದ ಆಟಕಿಲ್ಲ ಬ್ರೇಕು
ಆಗಾಗ ಆಟದಲ್ಲಿ ಗೆಳೆಯರ ಮುನಿಸು
ಮರುಕ್ಷಣವೇ ಮುನಿಸ ಮರೆವ ಮನಸು
ಭಾನುವಾರ ಇಲ್ಲ ಯಾವ ಚಿಂತೆ
ಸೋಮವಾರ ಹೊರ ಬೇಕು ಪುಸ್ತಕದ ಕಂತೆ
ತಿಳಿಯದ ಪ್ರಶ್ನೆಗೆ, ಅರಿಯದ ಉತ್ತರ
ಬೆಳೆಯ ಬೇಕೆಂಬ ಆಸೆ ಬಾನೆತರ
ಶಾಲೆಗೆ ಹೆದರಿ ಹೋಗಲು ಹಿಡಿದ ಪಟ್ಟು
ಕೊನೆಗೆ ಎರಡು ಕಡೆ ತಿಂದ ಪೆಟ್ಟು
ನಕ್ಕು ನಗಿಸಿದ ಆ ಕ್ಷಣಗಳು
ಈಗ ಬರಿಯ ನೆನೆಪುಗಳು
ಬಾಲ್ಯದ ನೆನಪೇ ಬಲು ಸುಂದರ
ಮರು ಮೆಲುಕಿದಷ್ಟು ಮದುರ
:- ಕನ್ನಡಿ
Sunday, March 14, 2010
ಮನೆಯಂಗಳದ ಹೂವು
ಮನೆಯಂಗಳದ ಹೂವು
ಮುದ್ದು ಕಂಗಳಲ್ಲಿ ಸ್ಪಟಿಕದ ಹೊಳಪು
ನಾಜೂಕು ಮೈ ತುಂಬಾ ನುಣುಪು
ಆಡುವ ಆಟ ತರಿಸುವುದು ನಮ್ಮ ಬಾಲ್ಯದ ನೆನಪು
ಆಟದಲ್ಲಿಲ್ಲ ಒಳಿತು ಕೆಡುಕಿನ ಅರಿವು
ಶಾಂತ ಮನಸು, ಇಲ್ಲದೆ ಪ್ರಪಂಚದ ಪರಿವು
ಪ್ರತಿ ಸ್ಪರ್ಶದಲಿ ಜ್ಯಾನದ ಹರಿವು
ಎಳೆಯ ಮನಸು ಮಾಡಲಾರದು ಯಾವ ನಿಲುವು
ಈಗ ಚಿತ್ತದಲಿ ಬರಿ ಪ್ರಶ್ನೆಗಳ ಬರುವು
ಮುಖದ ಕನ್ನಡಿ ನೋಡಲು ಚೆಲುವು
ಎಂಥ: ನೋಡುಗನ ಮನದಲ್ಲೂ ಹುಟ್ಟುವುದು ಒಲವು
ಆ ಮುದ್ದು ಗೊಂಬೆಯ ತಬಿದಾಗ ಖುಷಿ ಸಿಕ್ಕಂತೆ ಗೆಲುವು
ಎಲ್ಲರ ಮನೆಯಂಗಳದಲಿ ಇರಬೇಕು ಇಂಥ: ಒಂದು ಸದಾ ನಗುವ ಹೂವು
Thursday, March 11, 2010
ಕಂಬನಿಯ ಕಥೆ
ನಾನೊಬ್ಬನೆ ಕುಳಿತ್ತಿದ್ದೆ ಸುಮ್ಮನೆ
ಕೇಳಿದಂತಾಯಿತು ಯಾರದೂ ಮಾತು ಮೆಲ್ಲನೆ
ಕಣ್ಣಂಚಿನಲ್ಲಿ ನಿಂತಿತ್ತು ಒಂದು ಕಣ್ಣೀರ ಹನಿ
ಹೇಳ ತೊಡಗಿತು ತನ್ನ ಕಥೆಯ ಸುರಿಸುತ್ತಾ ಕಂಬನಿ
ಎಲ್ಲರ೦ತ್ತಿರಲಿಲ್ಲ ಆಕೆ
ಕಂಡಂದಿನಿಂದ ಗರಿಗೆದರಿದವು ಹಲವಾರು ಬಯಕೆ
ಕಾಣುತಿತ್ತು ಅದರ ಪ್ರೀತಿ, ಸ್ಪಟಿಕ ಸ್ಪಷ್ಟದಷ್ಟೇ ನಿಜ
ಸಮಾದಾನಿಸುತ್ತಾ ನಾನಂದೆ, ಪ್ರೀತಿಯ ಹುಟ್ಟು ಎಲ್ಲರಲ್ಲೂ ನಿಜ
ಉದುರಿದವು ಕಣ್ಣೀರ ಹನಿ ಹಲವು
ಉದುರುವ ಪ್ರತಿ ಹನಿಯ ಕಂಬನಿಗೆ ಕಾರಣ ಒಂದೇ, ಆಕೆಯ ಒಲವು
ಪ್ರೀತಿಯ ತಿರಸ್ಕರಿಸಿದಕ್ಕಿಲ್ಲ ಎನಗೆ ದುಖ:
ಕಂಡು ಕಾಣದಂತೆ ಮರೆಯಾಗುವುದು ನೀಡಿದೆ ಸಿಡಿಲ ಹೊಡೆತ
ಕಂಬನಿಯ ಕೊನೆಯ ಮಾತು ಕೇಳಿ ನನ್ನ ಕಣ್ಣಲ್ಲೂ ಬಂತು ನೀರು
ಜೊತೆಜೊತೆಯಾಗಿ ಉದುರಿದೆರಡು ಹನಿಗಳು ಮರೆಯಾದವು ಉಳಿಸದೆ ಒಂದೂ ಕುರುಹು
:- ಕನ್ನಡಿ
ನಿರಂತರ
ನಿರಂತರ
ಕಣ್ಣಂಚಿನಲಿ ಕಂಡ ಕನಸು
ಕಣ್ಣೀರ ಸುರಿಸಿ
ಮರೆಯಾಯಿತು ಈ ಹೊತ್ತು
ಭಾರವಾದ ಎದೆ
ನನ್ನಿಂದ ನಾ ಕಳೆದುಕೊಂಡ ಕಥೆ
ಆಗಿದೆ ಇಂದು ಬರಿಯ ವ್ಯಥೆ
ನಿನ್ನ ಮೌನ ಕರ್ಕಶವಾಗಿ
ಭಾವನೆ ಕಣ್ಣೀರ ಹನಿಯಾಗಿ
ಮೊದಲ ಬಾರಿಗೆ ಪ್ರೀತಿ ನಿನಗಾಗಿ
ನಿನ್ನಿಂದ ದೂರವಾಗ ಬೇಕೆಂದರು
ಆಗುತಿಲ್ಲ ನನ್ನಿಂದ
ನಿನ್ನ ಸ್ನೇಹಕೊಸ್ಕರ ಮಿಡಿಯುತಿದೆ
ಈ ಹೃದಯ ನಿರಂತರ .....
:- ಕನ್ನಡಿ
Saturday, March 6, 2010
ಅಂತರಂಗ
ಅಂತರಂಗ
ಎದೆಯಲ್ಲಿ ನೀನಿಲ್ಲದೆ ಹೆಪ್ಪುಗಟ್ಟಿದೆ ಕಣ್ಣಿರು
ರಾತ್ರಿಯ ಚಂದ್ರ, ನಕ್ಷತ್ರಗಳ ನಡುವೆ ಇದ್ದು ಒಂಟಿಯಾತ
ಹಾಗೆ ಇಲ್ಲಿ ಎಲ್ಲರ ನಡುವಿದ್ದು ಒಂಟಿ ನಾನು
ಯಾಕೆ ಅಂತರಂಗದಲಿ ಈ ನೋವು.......
ಮನದ ಪ್ರಶ್ನೆಗಳಿಗೆ ಉತ್ತರ ಸಿಕ್ಕರೂ ಸಿಗದ ಅನುಭವ
ಇಗ ಲಗಾಮು ಕಳೆದು ಕೊಂಡಿದೆ ಮನಸ್ಸಿನ ಭಾವ
ಬೇಡ ಎಂದರು ನಿನ್ನ ಸನಿಹವ ಬಯಸುತಿದೆ ಈ ಜೀವ
ಯಾಕೆ ಅಂತರಂಗದಲಿ ಈ ನೋವು......
ಮತ್ತೆ ಮೊದಲಿನಂತೆ ಇರುವಾಸೆ
ಮತ್ತೆ ಆ ಕನಸಿನ ಲೋಕದಲಿ ತೇಲುವಾಸೆ
ಮತ್ತದೆ ಭಯ, ಎಲ್ಲಿ ನನ್ನ ಪ್ರೀತಿ ಬದಲಿಸುವುದೋ
ನಿನ್ನ ಜೀವನ ದೆಸೆ............
ಯಾಕೆ ಅಂತರಂಗದಲಿ ಈ ನೋವು......
ಉತ್ತರಿಸದೆ ಎದೆ ಸುಡುವ ಕಾವು.???
ಉತ್ತರಿಸದೆ ಎದೆ ಸುಡುವ ಕಾವು.???
:- ಕನ್ನಡಿ
Thursday, March 4, 2010
ದಡದ ಪ್ರೀತಿ
ದಡದ ಪ್ರೀತಿ
ಹರಿವ ನದಿ ಕೊನೆಗೆ ಸೇರುವುದು
ಸಾಗರವ
ನದಿ ಲೆಕ್ಕಿಸದು ದಾರಿಯಲಿ ಸಿಕ್ಕ
ನದಿ ದಡವ
ಕೊಚ್ಚಿ ಹೋದರು ಅದರ ಪ್ರೀತಿಯ
ಕನಸು
ಎಂದೂ ತಡೆಯದು ನದಿಯ
ಹರಿವು
ಕೊಚ್ಚಿ ಹೋದಷ್ಟು ಹೆಚ್ಚುತಿಹುದು
ಪ್ರೀತಿ
ನದಿಯ ತಡೆದಲ್ಲಿ, ಸ್ನೇಹ ಮುರಿದು ಬೀಳುವ
ಭೀತಿ
ನದಿಯ ಸಂತೋಷ, ಹಿಡಿದಾಗ ಸಾಗರವ
ಅಪ್ಪಿ
ಈ ನದಿಯ ಸಂತೋಷವ ಕಂಡು, ನದಿಯ ದಡಕ್ಕೆ
ತೃಪ್ತಿ
:- ಕನ್ನಡಿ
Subscribe to:
Posts (Atom)